ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ
ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಡಾ. ಗುಬ್ಬಿ ವೀರಣ್ಣನವರದು. ರಂಗಭೂಮಿ ಮನೆ ಮಾತಾಗಿದ್ದ ಮಹನೀಯರ ಸ್ಮರಣಾರ್ಥ ರಂಗಭೂಮಿಗೆ ಶ್ರಮಿಸಿದ ಶ್ರೇಷ್ಠ ನಾಟಕಕಾರರನ್ನು ಗುರುತಿಸಿ ಆ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂದು ಶ್ರೀಯುತರ ಹೆಸರಿನಲ್ಲಿ 1993ರಲ್ಲಿ ಡಾ: ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ (ಮೂರು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ. ಸರ್ಕಾರಿ ಆದೇಶ ಸಂಖ್ಯೆ: ಸಂಕಇ/91/ಕಗಾಧ/94, ಬೆಂಗಳೂರು, ದಿನಾಂಕ: 19-09-1995 ರಂತೆ ಕರ್ನಾಟಕ ರಾಜ್ಯದ ವೃತ್ತಿ ರಂಗಭೂಮಿಯಲ್ಲಿ ಅಪಾರ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಡಾ. ರಾಜ್ ಕುಮಾರ್ ರವರ ಹೆಸರಿನ ಪ್ರಶಸ್ತಿಯನ್ನು ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ ಎಂದು ಮಾರ್ಪಡಿಸಿದೆ.
ಕ್ರಮ ಸಂಖ್ಯೆ | ಭಾವಚಿತ್ರ | ಪ್ರಶಸ್ತಿ ಪುರಸ್ಕೃತರು | ವರ್ಷ |
---|---|---|---|
1 | ![]() |
ಶ್ರೀ ಏಣಗಿ ಬಾಳಪ್ಪ | 1994 |
2 | ![]() |
ಡಾ|| ಬಿ.ವಿ. ಕಾರಂತ | 1995 |
3 | ![]() |
ಡಾ|| ಗಿರೀಶ್ ಕಾರ್ನಾಡ್ | 1996 |
4 | ![]() |
ಮಾಸ್ಟರ್ ಹಿರಣ್ಣಯ್ಯ | 1997 |
5 | ![]() |
ಶ್ರೀ ಹೆಚ್. ಕೆ. ಯೋಗಾನರಸಿಂಹ | 1998 |
6 | ![]() |
ಶ್ರೀ ಪಿ. ಬಿ. ಧುತ್ತರಗಿ | 1999 |
7 | ![]() |
ಶ್ರೀ ಎಚ್. ಎನ್.ಹೂಗಾರ | 2000 |
8 | ![]() |
ಶ್ರೀಮತಿ ಆರ್. ನಾಗರತ್ನಮ್ಮ | 2001 |
9 | ![]() |
ಪದ್ಮಶ್ರೀ ಚಿಂದೋಡಿ ಲೀಲಾ | 2002 |
10 | ![]() |
ಶ್ರೀ ಬಿ.ಆರ್. ಅರಿಶಿಣಗೋಡಿ | 2003 |
11 | ![]() |
ಶ್ರೀ ಬಸವರಾಜ ಗುಡಿಗೇರಿ | 2004 |
12 | ![]() |
ಶ್ರೀಮತಿ ರೇಣುಕಮ್ಮ ಮುರಗೋಡು | 2005 |
13 | ![]() |
ಶ್ರೀಮತಿ ಜಿ.ವಿ. ಮಾಲತಮ್ಮ | 2006 |
14 | ![]() |
ಶ್ರೀಮತಿ ಸುಭದ್ರಮ್ಮ ಮನ್ಸೂರು | 2007 |
15 | ![]() |
ಶ್ರೀ ಎಚ್. ಟಿ. ಅರಸು | 2008 |
16 | ![]() |
ಶ್ರೀ ಪಿ. ವಜ್ರಪ್ಪ, ಬೆಂಗಳೂರು | 2009 |
17 | ![]() |
ಶ್ರೀಮತಿ ಪ್ರಮೀಳಮ್ಮ ಗುಡೂರು, ಬಾಗಲಕೋಟೆ | 2010 |
18 | ![]() |
ಶ್ರೀ ಎಲ್. ಬಿ. ಕೆ. ಅಲ್ದಾಳ್, ಗುಲ್ಬರ್ಗಾ | 2011 |
19 | ![]() |
ಶ್ರೀಮತಿ ಲಕ್ಷ್ಮೀಬಾಯಿ ಏಣಗಿ, ಧಾರವಾಡ | 2012 |
20 | ![]() |
ಶ್ರೀ ಫಕೀರಪ್ಪ ವರವಿ, ಗದಗ | 2013 |
21 | ![]() |
ಶ್ರೀಮತಿ ರಂಗನಾಯಕಮ್ಮ | 2014 |
22 | ![]() |
ಶ್ರೀ ಆರ್. ಪರಮಶಿವನ್, ಬೆಂಗಳೂರು | 2015 |
23 | ![]() |
ಶ್ರೀ ಚಿಂದೋಡಿ ಶ್ರೀಕಂಠೇಶ್, ದಾವಣಗೆರೆ | 2016 |
24 | ![]() |
ಶ್ರೀಮತಿ ಥೆರೆಸಮ್ಮ ಡಿಸೋಜಾ, ಹುಬ್ಬಳ್ಳಿ | 2017 |
25 | ![]() |
ಶ್ರೀ ಪ್ರಕಾಶ ಕಡಪಟ್ಟಿ | 2018 |