ಕರ್ನಾಟಕ ನಾಟಕ ಅಕಾಡೆಮಿಯ ೨೦೧೮-೧೯ನೇ ಸಾಲಿನ ಪ್ರಶಸ್ತಿಗಳ ವಿವರ


15 Dec 2018 07:36 am

ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಯಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ, ವಾರ್ಷಿಕ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತಾ ಬಂದಿದೆ.

೨೦೧೮-೧೯ನೇ ಸಾಲಿನ ನಾಟಕ ಅಕಾಡೆಮಿಯ ಸರ್ವಾನುಮತದಿಂದ ನಾಟಕ ಅಕಾಡೆಮಿಯ ಸರ್ವಸದಸ್ಯರುಗಳ ಸಭೆಯಲ್ಲಿ ರಂಗಸಾಧಕರನ್ನು ಆಯ್ಕೆ ಮಾಡಿ, ಅವರುಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಕರ್ನಾಟಕದಾದ್ಯಂತ ರಂಗಚಳುವಳಿಯನ್ನು ಹಮ್ಮಿಕೊಂಡು, ನೂರಾರು ರಂಗಕರ್ಮಿಗಳನ್ನು ಹುಟ್ಟುಹಾಕಿದ ಹಿರಿಯ ನಿರ್ದೇಶಕರಾದ ಹಾಗೂ ಮೈಸೂರು ರಂಗಾಯಣವನ್ನು ಕಟ್ಟಲು ಕಾರಂತರ ಜೊತೆ ದುಡಿದ ಹಿರಿಯ ರಂಗಜೀವಿ ಗೌರವಾನ್ವಿತ ಪಿ.ಗಂಗಾಧರಸ್ವಾಮಿಯವರಿಗೆ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ನೀಡಿ, ಅಕಾಡೆಮಿಯು ತನ್ನನ್ನು ತಾನೇ ಗೌರವಿಸಿಕೊಳ್ಳುತ್ತಿದೆ.

ಒಟ್ಟು ೨೫ ವಾರ್ಷಿಕ ಪ್ರಶಸ್ತಿ ಹಾಗೂ ೪ ಅಕಾಡೆಮಿ ದತ್ತಿ ಪ್ರಶಸ್ತಿಗಳನ್ನು ಗುರುತಿಸಿ, ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಜೀವನ ಸಾಧನೆ ಪ್ರಶಸ್ತಿಗೆ ರೂ.೫೦,೦೦೦/- ವಾರ್ಷಿಕ ಪ್ರಶಸ್ತಿಗೆ ರೂ.೨೫,೦೦೦/- ಹಾಗೂ ಅಕಾಡೆಮಿಯ ದತ್ತಿ ಪ್ರಶಸ್ತಿಗೆ ರೂ.೫,೦೦೦/- ಗಳ ನಗದಿನ ಜೊತೆಯಲ್ಲಿ ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ, ಗೌರವಿಸಲಾಗುತ್ತದೆ.

ಈ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಈ ಬಾರಿ ಕರಾವಳಿಯ ಉಡುಪಿಯಲ್ಲಿ ೨೦೧೯ ಫೆಬ್ರವರಿ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಆಯ್ಕೆಯಾದ ಎಲ್ಲಾ ರಂಗಸಾಧಕರ ಪಟ್ಟಿ:

೧. ಜೀವಮಾನದ ಗೌರವ ಪ್ರಶಸ್ತಿ:

ಹೆಸರು ಸ್ಥಳ ಪ್ರಕಾರ ಭಾವಚಿತ್ರ
ಶ್ರೀ ಪಿ.ಗಂಗಾಧರಸ್ವಾಮಿ ಮೈಸೂರು ನಿರ್ದೇಶಕ

೨.ಅಕಾಡೆಮಿ ವಾರ್ಷಿಕ ರಂಗಪ್ರಶಸ್ತಿ:

ಕ್ರ ಸಂ ಹೆಸರು ಸ್ಥಳ ವಯಸ್ಸು ಪ್ರಕಾರ ಭಾವಚಿತ್ರ
ಶ್ರೀ ಉಗಮ ಶ್ರೀನಿವಾಸ ಬೆಂಗಳೂರು ೫೩ ಹವ್ಯಾಸಿ ರಂಗಭೂಮಿ, ರಂಗಸಂಘಟಕ, ನಟ, ರಂಗವಿಮರ್ಶೆ
ಶ್ರೀ ಡಿ.ಎಲ್.ನಂಜುಂಡಸ್ವಾಮಿ ತುಮಕೂರು ೫೮ ಗ್ರಾಮೀಣ ರಂಗಭೂಮಿ, ರಂಗಸಂಗೀತ
ಶ್ರೀ ಜಕಾವುಲ್ಲಾ ಹಾಸನ   ನಟ, ವೃತ್ತಿರಂಗಭೂಮಿ
ಶ್ರೀ ಪ್ರಭಾಕರ ಜೋಷಿ ಕಲಬುರ್ಗಿ ೫೩ ನಟ, ನಿರ್ದೇಶಕ, ಸಂಘಟಕ, ಸಾಹಿತ್ಯ, ಹವ್ಯಾಸಿ ರಂಗಭೂಮಿ
ಶ್ರೀ ವಿಜಯಾನಂದ ಕರಡಿಗುಡ್ಡ ರಾಯಚೂರು ೫೨ ವೃತ್ತಿರಂಗಭೂಮಿ ನಟ  
ಶ್ರೀ ಖಾಜೇಸಾಬ  ಜಂಗಿ ಬಾಗಲಕೋಟೆ ೬೩ ವೃತ್ತಿರಂಗಭೂಮಿ ನಟ
ಶ್ರೀ ಬಸಪ್ಪ ಮದರಿ ವಿಜಯಪುರ ೭೨ ವೃತ್ತಿರಂಗಭೂಮಿ ನಟ  
ಶ್ರೀ ಎಂ.ರವಿ ಬೆಂಗಳೂರು ೫೦ ನೇಪಥ್ಯ, ನಟ, ನಿರ್ದೇಶಕ
ಶ್ರೀ ಜಗದೀಶ್ ಕೆಂಗನಾಳ ಬೆಂಗಳೂರು ಗ್ರಾಮಾಂತರ ೫೨ ನಟ, ಹವ್ಯಾಸಿ ರಂಗಭೂಮಿ, ಸಂಘಟಕ
೧೦ ಶ್ರೀ ಕಿರಗಸೂರು ರಾಜಪ್ಪ ಚಾಮರಾಜನಗರ ೭೮ ರಂಗಸಂಗೀತ, ನಿರ್ದೇಶಕ, ಗ್ರಾಮೀಣ ರಂಗಭೂಮಿ
೧೧ ಶ್ರೀ ಟಿ.ಪ್ರಭಾಕರ ಕಲ್ಯಾಣಿ ಉಡುಪಿ ೬೦ ನಟ, ಸಂಘಟಕ, ಹವ್ಯಾಸಿ ರಂಗಭೂಮಿ  
೧೨ ಶ್ರೀಮತಿ ಎಸ್.ಆಂಜಿನಮ್ಮ ಬಳ್ಳಾರಿ ೫೩ ನಟಿ, ಪೌರಾಣಿಕ
೧೩ ಶ್ರೀಮತಿ ಸಾವಿತ್ರಿ ನಾರಾಯಣಪ್ಪ ಗೌಡರ ಗದಗ ೬೪ ನಟಿ, ವೃತ್ತಿರಂಗಭೂಮಿ
೧೪ ಶ್ರೀ ಮಕಮ್ಮಲ್ ಹುಣಸಿಕಟ್ಟಿ ಬೆಳಗಾಂ ೫೦ ನಟ, ನಿರ್ದೇಶಕ, ಸಂಘಟಕ  
೧೫ ಶ್ರೀ ಹನುಮಂತಪ್ಪ ಬಾಗಲಕೋಟಿ ಚಿತ್ರದುರ್ಗ ೬೯ ವೃತ್ತಿರಂಗಭೂಮಿ ನಟ
೧೬ ಡಾ.ಕೆ.ವೈ.ನಾರಾಯಣಸ್ವಾಮಿ ಕೋಲಾರ ೫೨ ನಾಟಕಕಾರರು
೧೭ ಶ್ರೀಮತಿ ಉಷಾಭಂಡಾರಿ ದಕ್ಷಿಣ ಕನ್ನಡ ೫೩ ನಟಿ, ನಿರ್ದೇಶಕಿ, ಹವ್ಯಾಸಿ
೧೮ ಶ್ರೀ ಡಿ.ಎಂ.ರಾಜಕುಮಾರ್ ಶಿವಮೊಗ್ಗ ೫೯ ನಟ, ಹವ್ಯಾಸಿ ರಂಗಭೂಮಿ
೧೯ ಶ್ರೀ ಅಂಜಿನಪ್ಪ ದೊಡ್ಡಬಳ್ಳಾಪುರ ೬೫ ನಟ, ಹವ್ಯಾಸಿ ರಂಗಭೂಮಿ
೨೦ ಶ್ರೀ ಹುಲಿವಾನ ಗಂಗಾಧರಯ್ಯ ತುಮಕೂರು ೭೦ ನಟ, ಸಂಘಟಕ
೨೧ ಶ್ರೀ ಮೋಹನ್ ಮಾರ್ನಾಡು ಮುಂಬಯಿ ೫೪ ನಟ, ಸಂಘಟಕ
೨೨ ಶ್ರೀ ಕೆಂಚೇಗೌಡ.ಟಿ ಮಂಡ್ಯ ೬೦ ನಟ, ಗ್ರಾಮೀಣ, ಪೌರಾಣಿಕರಂಗಭೂಮಿ
೨೩ ಶ್ರೀ ಮೈಮ್ ರಮೇಶ್ ಮೈಸೂರು ೬೨ ನಟ, ರಂಗಸಂಘಟಕ, ನಿರ್ದೇಶಕ
೨೪ ಶ್ರೀ ಚಿಂದೋಡಿ ಚಂದ್ರಧರ ದಾವಣಗೆರೆ ೫೯ ವೃತ್ತಿರಂಗಭೂಮಿ ನಟ, ಕಂಪನಿ ಮಾಲೀಕರು
೨೫ ಶ್ರೀ ಈಶ್ವರದಲಾ ತುಮಕೂರು ೫೮ ನಟ, ಹವ್ಯಾಸಿ ರಂಗಭೂಮಿ

 

೩. ಅಕಾಡೆಮಿಯ ಕಲ್ಚರ್‍ಡ್  ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಪ್ರಶಸ್ತಿ:

ಹೆಸರು ಸ್ಥಳ ವಯಸ್ಸು ಪ್ರಕಾರ ಭಾವಚಿತ್ರ
ಶ್ರೀ ನಿಕೋಲಸ್ ಹಾಸನ ೬೮ ನಟ, ನಿರ್ದೇಶಕ, ಹವ್ಯಾಸಿ ರಂಗಭೂಮಿ

 

೪. ಅಕಾಡೆಮಿಯ ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ಪ್ರಶಸ್ತಿ :

ಹೆಸರು ಸ್ಥಳ ವಯಸ್ಸು ಪ್ರಕಾರ ಭಾವಚಿತ್ರ
ಶ್ರೀ ಮೃತ್ಯುಂಜಯಸ್ವಾಮಿ  ಹಿರೇಮಠ ಶಿವಮೊಗ್ಗ ೭೨ ವೃತ್ತಿರಂಗಭೂಮಿ ನಟ

೫. ಅಕಾಡೆಮಿಯ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ:

ಹೆಸರು ಸ್ಥಳ ವಯಸ್ಸು ಪ್ರಕಾರ ಭಾವಚಿತ್ರ
ಶ್ರೀ ಎಂ.ಎಸ್.ಮಾಳವಾಡ ಧಾರವಾಡ ೬೨ ನಿರ್ದೇಶಕ, ವೃತ್ತಿರಂಗಭೂಮಿ ನಾಟಕಕಾರ /ಸಂಘಟಕ

೬. ಅಕಾಡೆಮಿಯ ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ:

ಹೆಸರು ಸ್ಥಳ ವಯಸ್ಸು ಪ್ರಕಾರ ಭಾವಚಿತ್ರ
ಶ್ರೀ ನ.ಲಿ.ನಾಗರಾಜ್ ರಾಮನಗರ ೭೫ ಹವ್ಯಾಸಿ ರಂಗಭೂಮಿ ನಟ

ಪ್ರಕಾರಗಳು :