ವೃತ್ತಿರಂಗಭೂಮಿಗಾಗಿ ಶಿಷ್ಯವೇತನ - ಅರ್ಜಿ ಆಹ್ವಾನ


20 Dec 2018 09:47 pm

ವೃತ್ತಿರಂಗಭೂಮಿಯಲ್ಲಿ ತರಬೇತಿ ಪಡೆದು, ಅದೇ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾಗಿರುವ ಯುವಕ /ಯುವತಿಯರಿಂದ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೆಳಕಂಡಂತೆ ಈ ಶಿಷ್ಯವೇತನವನ್ನು ೬ ತಿಂಗಳಿಗೆ ನೀಡಲಾಗುತ್ತದೆ.

೧. ಒಟ್ಟು ೧೫ ಜನ ಯುವಕರಿಗೆ ಈ ಶಿಷ್ಯವೇತನ ನೀಡಲಾಗುತ್ತದೆ. ಶಿಷ್ಯವೇತನದ ಮೊತ್ತ ಮಾಹೆಯಾನ ರೂ.೧೦,೦೦೦/-ಗಳು (೬ ತಿಂಗಳಿಗೆ ಮಾತ್ರ)
೨. ಆಯ್ಕೆಯಾದ ಅಭ್ಯರ್ಥಿಗಳು ೬ ತಿಂಗಳುಗಳ ಕಾಲ ಅಕಾಡೆಮಿ ಸೂಚಿಸುವ ವೃತ್ತಿನಾಟಕ ಕಂಪನಿಯಲ್ಲಿ ಸ್ವಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಊಟ, ವಸತಿಯನ್ನು ಆಯಾ ವೃತ್ತಿನಾಟಕ ಸಂಸ್ಥೆ ಒದಗಿಸುತ್ತದೆ.
೩. ೧೮ ರಿಂದ ೩೫ ವರ್ಷಗಳ ವಯೋಮಿತಿಯವರಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಆಸಕ್ತರಿಗೆ ಆದ್ಯತೆ ನೀಡಲಾಗುತ್ತದೆ.
೪. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೌಖಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೌಖಿಕ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹೋಗಬೇಕು.
೫. ಆಸಕ್ತಿಯುಳ್ಳ ಆಭ್ಯರ್ಥಿಗಳು ತಮ್ಮ ಸ್ವವಿವರ ಹಾಗೂ ರಂಗಭೂಮಿ ಅನುಭವದ ಕುರಿತು ಸ್ವಯಂ ಅರ್ಜಿಯನ್ನು ಸಲ್ಲಿಸಬೇಕು.
೬. ಅಭ್ಯರ್ಥಿಗಳು ಕನಿಷ್ಠ ೭ನೇ ತರಗತಿ ಓದಿರಬೇಕು ಹಾಗು ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕೌಶಲ್ಯ ಹೊಂದಿರಬೇಕು.
೭. ರಂಗಭೂಮಿಯಲ್ಲಿ ಅನುಭವವಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
೮. ಅರ್ಜಿ ಸಲ್ಲಿಸಬೇಕಾದ ವಿಳಾಸ:
ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ,
ಕನ್ನಡ ಭವನ, ಜೆ.ಸಿ.ರಸ್ತೆ,
ಬೆಂಗಳೂರು-೫೬೦೦೦೨.
ದೂ:೦೮೦-೨೨೨೩೭೪೮೪.
ಈ ವಿಳಾಸಕ್ಕೆ ೨೦೧೯ ಜನವರಿ ೧೦ ರ ಒಳಗೆ ಕಳುಹಿಸಬೇಕು.


ಪ್ರಕಾರಗಳು :