ರಂಗತರಬೇತಿ ಶಿಬಿರ/ಕಾರ್ಯಾಗಾರಕ್ಕೆ ಅರ್ಜಿ ಅಹ್ವಾನ (ಮುಗಿದಿದೆ)


14 Nov 2019 09:53 pm

ವಿಶೇಷಘಟಕ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರಂಗತರಬೇತಿ ಶಿಬಿರ/ಕಾರ್ಯಾಗಾರ

ಕರ್ನಾಟಕ ನಾಟಕ ಅಕಾಡೆಮಿಯು ರಂಗಕಲೆಯನ್ನು ಉತ್ತೇಜಿಸುವ ದೃಷ್ಠಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರಂಗಭೂಮಿಯ ಬಗ್ಗೆ ಅನುಭವವಿರುವ ಅಭ್ಯರ್ಥಿಗಳಿಗೆ ವಸತಿ ಸಹಿತ ತರಬೇತಿ ಶಿಬಿರ / ಕಾರ್ಯಾಗಾರವನ್ನು ನೀಡಲು ನಿರ್ಧರಿಸಿದೆ.

ಅರ್ಜಿದಾರರು ಕರ್ನಾಟಕದವರಾಗಿದ್ದು, ವಯೋಮಿತಿ ೧೮ ರಿಂದ ೪೦ ವರ್ಷ ಒಳಗಿರಬೇಕು. ಮಹಿಳೆಯರು ಮತ್ತು ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರಗಳೊಂದಿಗೆ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹಾಗೂ ಸ್ವ-ವಿವರವುಳ್ಳ(ಬಯೋಡೇಟಾ)ವನ್ನು ದಿನಾಂಕ ೧೦-೧೨-೨೦೧೯ರ ಒಳಗಾಗಿ ನಾಟಕ ಅಕಾಡೆಮಿಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨, ದೂ:೦೮೦-೨೨೨೩೭೪೮೪ ಇವರಿಗೆ ತಲುಪಿಸಲು ಕೋರಿದೆ.

ತಡವಾಗಿ ಬಂದ ಅರ್ಜಿ ಹಾಗೂ ಅಪೂರ್ಣ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ವೆಬ್‌ಸೈಟ್: www.karnatakanatakaacademy.com ಸಂಪರ್ಕಿಸಬಹುದಾಗಿದೆ.

 


ಪ್ರಕಾರಗಳು :