ಶ್ರೀಯುತ ರಂಗಭೀಷ್ಮ ಶ್ರೀ ಆರ್ ಪರಮಶಿವನ್‌ರವರಿಗೆ ಭಾವಪೂರ್ಣ ಶ್ರದ್ದಾಂಜಲಿ


03 Jan 2021 08:18 am

ಸಂಗೀತ ಹಾಗು ರಂಗ ಲೋಕದಲ್ಲಿ ಸುವಿಖ್ಯಾತರಾಗಿದ್ದ ರಂಗಭೀಷ್ಮ ಶ್ರೀ ಆರ್ ಪರಮಶಿವನ್ ಅವರು ನಮ್ಮನ್ನು ಅಗಲಿದ್ದು ಸಮಸ್ತ ಕಲಾಲೋಕಕ್ಕೆ ಆಘಾತವುಂಟು ಮಾಡಿದೆ. ಶ್ರೀಯುತರು ರಾಜ್ಯ ನಾಟಕ ಅಕಾಡೆಮಿ, ಕೇಂದ್ರ ಸಂಗೀತ ನಾಟಕ, ಶ್ರೀ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಪುರಸ್ಕೃತರಾಗಿದ್ದು ಈ ಜ್ಞಾನಾಂಬುಧಿ ಇಳಿ ವಯಸ್ಸಿನಲ್ಲೂ ಅತ್ಯಂತ ಕಿರಿಯರಿಗೂ ಅಷ್ಟೇ ಆಸ್ಥೆಯಿಂದ ಸಂಗೀತ ನೀಡುತ್ತಿದ್ದರು. ಬಾಲ ನಟರಾಗಿ ರಂಗವೇರಿದ ಪರಮಶಿವನ್ ಅವರು ರಂಗ ಸಂಯೋಜಕರಾಗಿಯೂ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಪ್ರತಿಷ್ಠಿತ ಹೆಸರು ಮಾಡಿದವರು. ರಂಗಭೂಮಿ, ಚಲನಚಿತ್ರ, ಕಂಪನಿನಾಟಕ ಸಂಗೀತದ ಮೇರು ವ್ಯಕ್ತಿಯು ನಮ್ಮ ನಡುವಿದ್ದರು ಎನ್ನುವುದು ನಮಗೆ ಹೆಮ್ಮೆ, ಅವರ ಬಾಳ್ವೆ ಆಶೀರ್ವಾದ ದಾರಿದೀಪ.

ಅವರ ನಿವಾಸಕ್ಕೆ ಇಂದು ಜನವರಿ ೨ ರಂದು ಬೆಳಿಗ್ಗೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಆರ್.ಭೀಮಸೇನ ಅವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಅಕಾಡೆಮಿಯಿಂದ ಗೌರವ ಸಲ್ಲಿಸಿದರು ಡಾ|| ಬಿ ವಿ ರಾಜರಾಂ ಸೇರಿದಂತೆ ಹಲವಾರು ಸಂಗೀತ, ನೃತ್ಯ ಹಾಗೂ ರಂಗಭೂಮಿ ಕಲಾವಿದರು ಹಾಜರಿದ್ದರು.

ರಂಗದಿಗ್ಗಜ ಶ್ರೀ ಆರ್ ಪರಮಶಿವನ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ.


ಪ್ರಕಾರಗಳು :